ಈ ಹೃದಯದ ಉಸಿರಿಗೆ.... (ಜಾಕಿ ಚಿತ್ರದ "ಎರಡು ಜಡೆಯನ್ನು" ಧಾಟಿಯಲ್ಲಿ...)

ಮನದ ಮುಗಿಲಲ್ಲಿ,
ಪ್ರೀತಿ ಮಳೆಯಾಗಿ,
ಈ ಹೃದಯ ಹಗುರಾಗಿದೆ.....

ಹೃದಯ ಹಗುರಾಗಿ,
ನೀ ಸಿಕ್ಕ ಕನಸು,,,
ನನಸಾಗಿ ನಗೆ ಬೀರಿದೆ....

ನೀ ಸನಿಹ ಬಂದಾಗ, ಮುತ್ತೊಂದ ನೀಡೆಂದು ಕೇಳೋದು ಒಲವಲ್ಲವೇ????
ನೀ ನಾಚಿ ದೂರಾಗಿ, ತುಟಿ ನಿಂದು ಸಿಗದಾಗ ಕಣ್ಣೀರು ತಪ್ಪೋಲ್ಲವೇ....

ನೀ ಕೊಟ್ಟ ಪ್ರೀತಿ..
ನನ್ನ ತಾಯಿ ರೀತಿ..
ತಾಯನ್ನೇ ನೀ ಮರೆಸಿದೆ ...

ನಿನ್ನ ಮಡಿಲಲ್ಲಿ,,
ನಾನು ಮಗುವಾಗಿ...
ನಿನ್ನುಸಿರನೇ ಉಸಿರಾಡುವೆ......

ಪ್ರೀತಿಗೆ ನಾ ಸೋತು, ನಿನ್ನನ್ನು ನಾ ಗೆದ್ದೆ, ನನ್ನ ಮಾತು ನಿಜವಲ್ಲವೆ???
ನಿನ್ನ ತೋಳ ಸೆರೆಯಲ್ಲಿ ನಾ ಬಂದು ಅವಿತಾಗ, ಪ್ರೀತಿಯು ಶುರುವಲ್ಲವೇ...

(ಈ ಹೃದಯದ ಉಸಿರಿಗೆ) ಕರುನಾಡ ಹೆಣ್ಣಿಗೆ ಅಲಂಕಾರ....

ನಿನ್ನ ಕಣ್ಣಿಗೆ ಕಾಡಿಗೆ ಆಯಿತು ಕರಾವಳಿ...
ನಿನ್ನ ಕಂಗಳ ಬೆಳಕಿನಿಂದಲೇ ಕರುನಾಡಿಗೆ ದೀಪಾವಳಿ...
ನಿನ್ನ ಉಸಿರಿನ ಪರಿಮಳಕ್ಕೆ ಸಾಟಿ ಇಲ್ಲ ಗಂಧದಗುಡಿಯ ಗಂಧಸಿರಿ..
ನಿನ್ನ ಚೆಲುವಿನಿಂದಲೇ ಇತಿಹಾಸ ಸೇರಿದ್ದು ಐಹೊಳೆಯ ಐಸಿರಿ...

ನಿನ್ನ ನಗು ನಗುವಿನಹಳ್ಳಿಯೇ ನಾಚುವಷ್ಟು ಸುಂದರ...
ನಿನ್ನ ಕ್ಯಗಳಿಗೆ ಬಳೆ ತೊಡಿಸಬೇಕಂತೆ ಬನವಾಸಿಯ ಬಳೆಗಾರ...
ನಿನ್ನ ಸೆಳೆಯಲೆಂದೇ ಕಿಂದರಿ ಜೋಗಿ ಊದಲು ಕಲಿತಿದ್ದು ತುತ್ತೂರಿ...
ನಿನ್ನ ಸೋಕಿ ಪುನೀತಳಾದಳು ಕೊಡಗಿನ ಕಾವೇರಿ...

ನಿನ್ನ ಕೇಶರಾಶಿಯ ಕಂಡು ಭೋರ್ಗರೆಯಿತು ಭರಚುಕ್ಕಿಯ ಜಲಪಾತ...
ನಿನ್ನ ಬಾಹುಗಳ ಬೆಚ್ಚನೆಯ ಅಪ್ಪುಗೆಯಿಂದ ಬಯಲುಸೀಮೆಯ ಬೆಟ್ಟಗಳಲ್ಲೂ ಹಿಮಪಾತ...
ನಮ್ಮ ಮದುವೆಗೆ ಮಲೆನಾಡು ಆಯಿತು ದಿಬ್ಬಣ...
ನಮ್ಮ ಹೃದಯಗಳ ಮಿಲನಕ್ಕೆ ಸಾಕ್ಷಿ ಮುರ್ಡೆಶ್ವರದ ಮೂಡಣ..

ನಿನ್ನ ನಾಡಿ ಮಿಡಿತದ ನಾದಕ್ಕೆ ಶ್ರುತಿ ಸೇರಿಸಿತು ರಂಗನತಿಟ್ಟಿನ ಕೋಗಿಲೆಯ ಕಲರವ,,
ಹೃದಯಂಗಮವಾದ ನಿನ್ನ ಪ್ರೀತಿಯಿಂದಲೇ ತುಂಗಭದ್ರೆಯ ಮಡಿಲಿನಲ್ಲಿ ನಿತ್ಯೋತ್ಸವ....
ನಿನ್ನ ಹಣೆಯಲ್ಲಿ ರಾರಾಜಿಸುವ ಕುಂಕುಮವ ಕಂಡು ಕನ್ನಡ ಆಚರಿಸಿತು ರಾಜ್ಯೋತ್ಸವ...

ಇಂತಹ ನನ್ನ ಕರುನಾಡ ಹೆಣ್ಣು ಹೆತ್ತ ಈ ಕರುನಾಡಿಗೆ ನನ್ನ ಕೊಡುಗೆ,
ದೇಹ ಕನ್ನಡದ ಮಣ್ಣಿಗೆ,,,
ಪ್ರಾಣ ಕನ್ನಡಮ್ಮನ ಮಗಳಾದ ಈ ಹೃದಯದ ಉಸಿರಿಗೆ....



  ಹೃದಯದಿಂದ ಈ ಹೃದಯದ ಉಸಿರಿಗೆ,
            ದರ್ಶನ್...........  

ಈ ಹೃದಯದ ಉಸಿರಿಗೆ......

ಅವಳ ಪ್ರೀತಿಗೆ ಸಾಟಿ ಇಲ್ಲ ಅಮೃತ...
ಅವಳ ಹೃದಯ ಕನ್ನಡಾಂಬೆಯ ದೇವಾಲಯದಂತೆ ಅದ್ಭುತ...
ಅವಳ ಕಂಗಳಲ್ಲಿ ಕಂಡ ಪ್ರೀತಿಯ ಕಂಡು, ಇದೆ ನನ್ನ ನಿಜವಾದ ಅರ್ಥ ಎಂದಿತು ನಿಸ್ವಾರ್ಥ
ನನ್ನ ಅವಳ ಮಿಲನಕ್ಕೆ ಆ ದೇವರೇ ಇಟ್ಟು ಮುಹೂರ್ತ
ಅವಳನ್ನು ಸದಾ ನೆನೆಯುವುದನ್ನು ಕಂಡು ಅಸೂಯೆ ಪಟ್ಟ ಆ ಸೃಷ್ಟಿಕರ್ತ.... 
ಅವಳೇ ಈ ಹೃದಯಕ್ಕೆ ಉಸಿರು, ಈ ಹೃದಯದ ಬಡಿತ...
ಈ ಮನದ ಮುಗಿಲಿನ ಮಿಡಿತ
ಅವಳ ಅಪ್ಪುಗೆಯೇ ಈ ಬಾಹುಗಳ ತುಡಿತ...
ಅವಳ ಪ್ರೀತಿ ಈ ಹೃದಯದಲ್ಲಿ, ಹೃದಯದ ಉಸಿರಿನಲ್ಲಿ,  ಹೃದಯದ ಪಿಸುಮಾತಿನಲ್ಲಿ ಶಾಶ್ವತ.....  



ಈ ಹೃದಯದ ಉಸಿರಿಗೆ, 
          ದರ್ಶನ್.......

ಈ ಹೃದಯದ ಉಸಿರಿಗೆ......

.ನಿನ್ನ ಪ್ರೀತಿಗೆ ಬೆರಗಾಗಿ ನಿನ್ನ ಹೃದಯಕ್ಕೆ ಉಸಿರಾಯಿತು ತಂಗಾಳಿ...
ನಿನ್ನ ಕಂಡ ಕಾಮನಬಿಲ್ಲಿಗೂ ಆಸೆಯಂತೆ ನಿನ್ನೊಂದಿಗೆ ಆಡಲು ಹೋಳಿ...
ಕನಸುಗಳ ಮನೆಯಂಗಳದಲ್ಲಿ ಹಾಕಿದೆ ಪ್ರೀತಿಯ ರಂಗೋಲಿ...
ನಿನ್ನ ಬಾಹುಬಂಧನಕ್ಕೆ  ಸಿಕ್ಕ ಸುಡುಬೇಸಿಗೆಗೂ ಆಯಿತು ಚಳಿ...
ಕತ್ತಲಾದ ಬಾಳಲ್ಲಿ ನೀನು ದೀಪ ಹಚ್ಚಿದಾಗ ಹೃದಯದಲ್ಲಿ ದೀಪಾವಳಿ...
ನಿನ್ನ ಚಂದ್ರನಂತಹ ಕಂಗಳಿಗೆ ಹುಣ್ನಿಮೆಯಾಯಿತು ಕರಾವಳಿ.....
ನಿನ್ನ ಕೊರಳಿನಲ್ಲಿ ನಾನಾಗಬೇಕು ತಾಳಿ......
ವರ್ಷದಲ್ಲಿ ನಮ್ಮ ಪ್ರೀತಿಯ ಪ್ರತಿರೂಪಕ್ಕೆ ನೀನು ಹಾಡಬೇಕು ಲಾಲಿ....

ಮಧುರವಾದ ಕಲ್ಪನೆ...... ಸಿಹಿಯಾದ ಭಾವನೆ.....

ನಿನ್ನ ಉಸಿರಿನ ತಂಗಾಳಿಗೆ ಮನಸೋತ ಕುವೆಂಪು...
ಅಂದರು, ಅಸೂಯೆ ಪಡುವುದು ಮಲ್ಲಿಗೆಯ ಕಂಪು,
ಏಕೆಂದರೆ ಸನಿಹದಲ್ಲಿದ್ದರೆ ನೀನು, ಬಿಸಿಲಿನಲ್ಲಿಯೂ ಹೊಂಗೆಯ ನೆರಳಂತೆ ಕಂಪು...
ನಿನ್ನನ್ನು ಕಂಡು ಅಂದರು ಬೇಂದ್ರೆ.....
ನೀನೇನಾ ಪ್ರೀತಿ ಅಂದ್ರೆ????

ನಿನ್ನ ಮನವ ಕಂಡು ಹೇಳಿದರು ಮಾಸ್ತಿ...
ನೀನೆಂದು ದರ್ಶನನ ಹೃದಯದ ಆಸ್ತಿ.....
ನಿನ್ನ ಕಂಗಳ ದೆದೀಪ್ಯಮಾನವಾದ ಬೆಳಕಿಗೆ ಬೆರಗಾದ ಆ ಕಡಲ ತೀರದ ಭಾರ್ಗವ...
ಅಂದರು, ಕೋಗಿಲೆಯ ಪ್ರತಿ ಹಾಡಿನಲ್ಲಿಯೂ ನಿನ್ನದೇ ಕಲರವ...
ಹೃದಯದ ಊರಿನಲ್ಲಿ ನಿನ್ನದೇ ಉತ್ಸವ.... 

ನಿನ್ನ ಕಾಲ್ಗೆಜ್ಜೆಯ ನಾದವ ಕೇಳಿ ಮರೆತಳು ಶಾರದೆ ಮೀಟುವುಡು ವೀಣೆಯ ತಂತಿ,
ಆಕಾಶದ ಎತ್ತರಕ್ಕೆ ಬೆಳೆಯಲಿ ನಿನ್ನ ಕೀರ್ತಿ,
ನೀರಿನಂತೆ ನಿರ್ಮಲವಾದ ನಿನ್ನ ನಗುವನ್ನು ಕಂಡು ಹೀಗೆ ಕೊಂಡಾಡಿದರು ಅನಂತಮೂರ್ತಿ...
ಮುಸ್ಸಂಜೆಯ ಕೆಂಪಾದ ಮೋಡಗಳನ್ನು ನಾಚಿಸುವ ನಿನ್ನ ಕೆನ್ನೆ ಕಂಡು ಕೇಳಿದನು ಆ ಗೋಕಾಕ...
ಯಾರಮ್ಮ ನಿನ್ನ ಬಾಳ ದೋಣಿಯ ನಾವಿಕ????

ಭೂಮಿಯಂತೆ ನಿಶ್ಚಲವಾದ ನಿನ್ನ ಮನಸ್ಸಿಗೆ ಮಳೆ ಸುರಿಸಿ ಪುನೀತವಾಯಿತು ಕಾರ್ಮೋಡ,
ನಿನ್ನ ವರ್ಣಿಸಲು ಪದಗಳಿಗೆ ಹುಡುಕಿತು ಕನ್ನಡ.....
ಕನ್ನಡಾಂಬೆಯ ಹಣೆಯ ಕುಂಕುಮದಸ್ಟು ಪವಿತ್ರವಾದ ನಿನ್ನ ಪ್ರೀತಿಗೆ ಧನ್ಯನಾಗಿ ಅಂದನು
ಆ ಗಿರೀಶ್ ಕಾರ್ನಾಡ....
ಭೂಪಟದಲ್ಲಿ ಮೆರೆಸಬೇಕೆಂದು ಪ್ರೀತಿಯ ಭವ್ಯ ಪರಂಪರೆಯನ್ನು ಸಾರುವ ನಿನ್ನಂಥ ಹೆಣ್ಣು ಇರುವ,
ಹೆಸರಿನಲ್ಲಿಯೇ ಕರುಣೆ ಇರುವ ನಮ್ಮ ಕರುನಾಡ............ 


ಹೃದಯದಿಂದ...........
   ದರ್ಶನ್.......