ಇಳೆಯ ಮೇಲಿನ ನೀರು ಆವಿಯಾಗಿ ಬರುವುದನ್ನೇ ಕಾಯುವುದು ಮುಗಿಲು..
ನೀನು ಹೃದಯಕ್ಕೆ ಪ್ರೀತಿಯಾಗಿ ಬರುವೆ ಎಂದು ಕಾದಿದ್ದೆ ನಾನು ತೆರೆದು ಈ ಹೃದಯದ ಬಾಗಿಲು,
ಮುಗಿಲು ಆವಿಯ ಮಿಲನದ ಫಲವೇ ಮೋಡಗಳು....
ನಮ್ಮ ಹೃದಯಗಳ ಮಿಲನಕ್ಕೆ ಕಾರಣವೇ ಹುಣ್ಣಿಮೆಯ ಚಂದ್ರನ್ನನ್ನೇ ನಾಚಿಸುವ ನಿನ್ನ ಕಂಗಳು...
ಮೋಡಗಳು ಸೇರಿದಾಗ ಮಾತನಾಡುವುದು ಸಿಡಿಲು...
ನೀ ಸನಿಹಕೆ ಬರಲು ಹೃದಯದಲ್ಲಿ ಉಕ್ಕಿತು ಪ್ರೀತಿ...ತಂಗಾಳಿಗೆ ಸೆಳೆತಕ್ಕೆ ಉಕ್ಕಿದಂತೆ ಕಡಲು....
ಸಿಡಿಲಿನ ಸಂಗೀತಕ್ಕೆ ಶ್ರುತಿ ಸೇರಿಸಿತು ಗುಡುಗು....
ಹೃದಯದಲ್ಲಿ ಹುಟ್ಟಿದ ಪ್ರೀತಿಗೇ ನಿನ್ನ ಉಸಿರಿನ ನಾದ ನೀಡಿತು ಮೆರುಗು....
ನಾಲ್ಕು ಹನಿಗಳಿಗಾಗಿ ರೈತ ಹಿಡಿದು ಕಾಯುವಂತೆ ನೇಗಿಲು,
ನಾನು ಕಾದಿದ್ದೆ ನಿನ್ನ ಕಂಗಳ ಅನಂದಬಾಷ್ಪಕ್ಕಾಗಿ ತೆಗೆಯಲು ಈ ಮನದಲ್ಲಿ ಪ್ರೀತಿಯ ಫಸಲು.... ಪ್ರೀತಿಯ ಮಳೆ ಸುರಿದು ತಂಪಾಗಿ ಪುನೀತಳಾದಳು ಇಳೆ,
ಸುರಿಸುತ ಜೇನಿನಹನಿಗಳು ತುಂಬಿದ ಪದಗಳ ಈ ಓಲೆ....
ತೊಡಿಸುವನು ಈ ಪ್ರೇಮಿ ನಿನ್ನ ಕೊರಳಿಗೆ ಕಾಮನಬಿಲ್ಲನ್ನು ಮಾಡಿ ಬಳೆ...
ನಿನ್ನ ನಾಚಿಕೆಯ ನೀರಿನಲ್ಲಿ ನಾನು ಸ್ನಾನವ ಮಾಡಲು,
ಸುಡುಬಿಸಿಲು ಕೂಡ ಆಯಿತು ನಿನ್ನ ನಗುವಿನಂತೆ ತಂಪಾದ ಬೆಳದಿಂಗಳು............
1 Comment
Subscribe to:
Comments (Atom)
