ಪರವಶನಾದೆನು ಹಾಡಿನ ದಾಟಿಗೆ ನನ್ನ ಸಾಹಿತ್ಯ....

ಭಾವುಕನಾದೆನು ಬರೆಯುವ ಮುನ್ನವೇ,,,

ಬರೆಯಲಿ ಹೆಗೆ ನೀ ಹೇಳು ಪ್ರೀತಿಗೂ ಮುನ್ನವೇ,,,

ತೊದಲುತ್ತ ಒ೦ದು ಮಾತು,

ತುಟಿಯ೦ಚಿನಿ೦ದ ಬ೦ತು..

ಈ ಪ್ರೀತಿಯ ಮಾತೊ೦ದನು ನಾ ಹೇಳಲೇ,,

ಬರೆಯುವ ಮುನ್ನವೇ...

 

 

ಹೃದಯ ಕದಿಯಬೇಡ ನೀನು,

ಆನುಮತಿ ಇಲ್ಲದೆ...

ಅದರ ಮಿಡಿತ ಜೋರು ಆಗಿ,

ಆಗಬಹುದು ತೊ೦ದರೆ...

ನೀ ಸನಿಹಕೆ ಬ೦ದರೆ..

ಕಣ್ಣ ರೆಪ್ಪೆ ಅಲುಗಾಡದ೦ತೆ..

ನಿನ್ನ ನಾ ನೋಡ ಹೋಗಿ,, ಒಲವಲ್ಲಿ ನಾ ಬಿದ್ದು ಹಾಳಾದೆ...

ನೀ ಹೇಗೆ ಇದ್ದರೂನೂ... ಹೃದಯಕ್ಕೆ ಉಸಿರೇ ನೀನು...

ಕಣ್ಣ೦ಚಲಿ ನಾ ಹಾಕಲೇ, ಹನಿಯೊ೦ದನು.....

ಒರೆಸುವ ಮುನ್ನವೇ....

 

 

ಭಾವುಕನಾದೆನು ಬರೆಯುವ ಮುನ್ನವೇ,,,

ಬರೆಯಲಿ ಹೆಗೆ ನೀ ಹೇಳು ಪ್ರೀತಿಗೂ ಮುನ್ನವೇ,,,

 

 

ಅಪ್ಪುಗೆಯಿ೦ದಲೇ ಬರೆಯುವೆ,

ಪ್ರಣಯಕೆ ಮುನ್ನುಡಿ...

ಓಲವಿಗೆ ಕ೦ಗಳ ನೋಟವೇ ಹಿಡಿದಿದೆ ಕನ್ನಡಿ..

ನನ್ನ ಪ್ರತಿರೂಪಕ್ಕೆ ನೀ ಹಾಡಬೇಕು,

ಜೋಗುಳವೊ೦ದನು ನಾ ನಿನಗೆ ಹಾಡಿದ ಹಾಗೆ.....

ಪ್ರಣಯಕ್ಕೆ ಬ೦ದು ನಾನು,,,, ಕಾಯುತ ಕೂರಲೇನು....

ಹೂಮುತ್ತನು ನಾ ನೀಡಲೇ, ನಿನ್ನ ಕಣ್ಣಿಗೆ... ಮಿಲನಕ್ಕೂ ಮುನ್ನವೇ.....

 

 

ಭಾವುಕನಾದೆನು ಬರೆಯುವ ಮುನ್ನವೇ,,,

ಬರೆಯಲಿ ಹೆಗೆ ನೀ ಹೇಳು ಪ್ರೀತಿಗೂ ಮುನ್ನವೇ,,,


ಅರಳು ಮಲ್ಲಿಗೆ ಅರಳು ಮಲ್ಲಿಗೆ... ನೀ ಅರಳಿಸೊಮ್ಮೆ ಒಂದು ಹೂ ನಗೆ...
ಬರಲಿ ಹುಣ್ಣಿಮೆ... ಬರಲಿ ಹುಣ್ಣಿಮೆ... ನೀ ಬರುವ ದಾರಿಯಲ್ಲಿ ಹುಣ್ಣಿಮೆ.....
ಭಾವನೆ,,, ನಿನ್ನ ಕಂಗಳಲ್ಲಿದೆ... ಆಕರ್ಷಣೆ,,,, ಕಣ್ ರೆಪ್ಪೆಯಲ್ಲಿದೆ...
ನಿನ್ನಿಂದಲೇ ಜಗಕೆ ಪೌರ್ಣಿಮೆ....

ಈ ಜನ್ಮವು ಮರುಜನ್ಮವು ನಿನ್ನೊಂದಿಗಿರಲಿ...
ಈ ಜೀವಕೆ ಒಲುಮೆಯು ನಿನಗಾಗಿರಲಿ...
ಈ ಹೃದಯದಕೆ ಉಸಿರು ಎಂದೂ ನೀನೆ ಕಣೆ....

ನಿನ್ ಹೆಸರಿಗೆ ನನ್ ಹೆಸರು ಸೇರಿದ ಘಳಿಗೆ....
ನಮ್ಮ ಪ್ರೀತಿಯ ಪ್ರತಿರೂಪ ನಿನ್ ಒಡಲೊಳಗೆ ...
ನಮ್ಮ ಪ್ರೀತಿಲಿ ಅದಕ್ಕೂ ಒಂದು ಪಾಲು ಕಣೆ...

ಕಣ್ಣ ಬೆಳಕಲ್ಲಿ.. ಲಜ್ಜೆ ಥುಳುಕಿದೆ....
ರಂಗಿನ ಹೋಳಿ.. ನಮ್ಮ ಬಾಳಲಿ
ಹಾಕುವೆ ಹೆಜ್ಜೆ... ನಿನ್ನ ಜೊತೆಯಲಿ.....

ಈ ಹೃದಯದ ಉಸಿರಿಗೆ.... ("ಮಳೆಯಲಿ ಜೊತೆಯಲಿ"ಯ ಏನೋ ಹೇಳಬೇಕು ಅಂದೇ ಏನದು ಧಾಟಿಯಲ್ಲಿ)

ನಿನ್ನ ಕಂಗಳಲ್ಲಿ ಕಂಡೆ ನನ್ನನೇ,,,
ಕಾರಣವಿಲ್ಲದೆ ನಿನ್ನವನಾದೆ ಸುಮ್ಮನೆ...
ಬೇಕಾಗಿದೆ ಈಗ ಸ್ಪಷ್ಟನೆ...

ಹೃದಯದ ತಪ್ಪಿಗೆ,,
ಸಿಕ್ಕಿತು ಅಪ್ಪುಗೆ....
ಮೆಲ್ಲನೆ ಹಾಕಿದೆ ಮನಕ್ಕೆ ಮುತ್ತಿಗೆ.......
 

ನನ್ನ ಪ್ರೀತಿ ಅಪರಂಜಿ...  
ನೀ ಮಾಡು ಮುತುವರ್ಜಿ,,,
ನೀ ತೋರಿದ ಕಾಳಜಿಗೆ,,,,  ಕಣ್ ತುದಿಯಲ್ಲಿ ಕಾರಂಜಿ......


  ಈ ಹೃದಯದ ಉಸಿರಿಗೆ....
         ದರ್ಶನ್.....  

ಈ ಹೃದಯದ ಉಸಿರಿಗೆ.... (ಜಾಕಿ ಚಿತ್ರದ "ಎರಡು ಜಡೆಯನ್ನು" ಧಾಟಿಯಲ್ಲಿ...)

ಮನದ ಮುಗಿಲಲ್ಲಿ,
ಪ್ರೀತಿ ಮಳೆಯಾಗಿ,
ಈ ಹೃದಯ ಹಗುರಾಗಿದೆ.....

ಹೃದಯ ಹಗುರಾಗಿ,
ನೀ ಸಿಕ್ಕ ಕನಸು,,,
ನನಸಾಗಿ ನಗೆ ಬೀರಿದೆ....

ನೀ ಸನಿಹ ಬಂದಾಗ, ಮುತ್ತೊಂದ ನೀಡೆಂದು ಕೇಳೋದು ಒಲವಲ್ಲವೇ????
ನೀ ನಾಚಿ ದೂರಾಗಿ, ತುಟಿ ನಿಂದು ಸಿಗದಾಗ ಕಣ್ಣೀರು ತಪ್ಪೋಲ್ಲವೇ....

ನೀ ಕೊಟ್ಟ ಪ್ರೀತಿ..
ನನ್ನ ತಾಯಿ ರೀತಿ..
ತಾಯನ್ನೇ ನೀ ಮರೆಸಿದೆ ...

ನಿನ್ನ ಮಡಿಲಲ್ಲಿ,,
ನಾನು ಮಗುವಾಗಿ...
ನಿನ್ನುಸಿರನೇ ಉಸಿರಾಡುವೆ......

ಪ್ರೀತಿಗೆ ನಾ ಸೋತು, ನಿನ್ನನ್ನು ನಾ ಗೆದ್ದೆ, ನನ್ನ ಮಾತು ನಿಜವಲ್ಲವೆ???
ನಿನ್ನ ತೋಳ ಸೆರೆಯಲ್ಲಿ ನಾ ಬಂದು ಅವಿತಾಗ, ಪ್ರೀತಿಯು ಶುರುವಲ್ಲವೇ...

(ಈ ಹೃದಯದ ಉಸಿರಿಗೆ) ಕರುನಾಡ ಹೆಣ್ಣಿಗೆ ಅಲಂಕಾರ....

ನಿನ್ನ ಕಣ್ಣಿಗೆ ಕಾಡಿಗೆ ಆಯಿತು ಕರಾವಳಿ...
ನಿನ್ನ ಕಂಗಳ ಬೆಳಕಿನಿಂದಲೇ ಕರುನಾಡಿಗೆ ದೀಪಾವಳಿ...
ನಿನ್ನ ಉಸಿರಿನ ಪರಿಮಳಕ್ಕೆ ಸಾಟಿ ಇಲ್ಲ ಗಂಧದಗುಡಿಯ ಗಂಧಸಿರಿ..
ನಿನ್ನ ಚೆಲುವಿನಿಂದಲೇ ಇತಿಹಾಸ ಸೇರಿದ್ದು ಐಹೊಳೆಯ ಐಸಿರಿ...

ನಿನ್ನ ನಗು ನಗುವಿನಹಳ್ಳಿಯೇ ನಾಚುವಷ್ಟು ಸುಂದರ...
ನಿನ್ನ ಕ್ಯಗಳಿಗೆ ಬಳೆ ತೊಡಿಸಬೇಕಂತೆ ಬನವಾಸಿಯ ಬಳೆಗಾರ...
ನಿನ್ನ ಸೆಳೆಯಲೆಂದೇ ಕಿಂದರಿ ಜೋಗಿ ಊದಲು ಕಲಿತಿದ್ದು ತುತ್ತೂರಿ...
ನಿನ್ನ ಸೋಕಿ ಪುನೀತಳಾದಳು ಕೊಡಗಿನ ಕಾವೇರಿ...

ನಿನ್ನ ಕೇಶರಾಶಿಯ ಕಂಡು ಭೋರ್ಗರೆಯಿತು ಭರಚುಕ್ಕಿಯ ಜಲಪಾತ...
ನಿನ್ನ ಬಾಹುಗಳ ಬೆಚ್ಚನೆಯ ಅಪ್ಪುಗೆಯಿಂದ ಬಯಲುಸೀಮೆಯ ಬೆಟ್ಟಗಳಲ್ಲೂ ಹಿಮಪಾತ...
ನಮ್ಮ ಮದುವೆಗೆ ಮಲೆನಾಡು ಆಯಿತು ದಿಬ್ಬಣ...
ನಮ್ಮ ಹೃದಯಗಳ ಮಿಲನಕ್ಕೆ ಸಾಕ್ಷಿ ಮುರ್ಡೆಶ್ವರದ ಮೂಡಣ..

ನಿನ್ನ ನಾಡಿ ಮಿಡಿತದ ನಾದಕ್ಕೆ ಶ್ರುತಿ ಸೇರಿಸಿತು ರಂಗನತಿಟ್ಟಿನ ಕೋಗಿಲೆಯ ಕಲರವ,,
ಹೃದಯಂಗಮವಾದ ನಿನ್ನ ಪ್ರೀತಿಯಿಂದಲೇ ತುಂಗಭದ್ರೆಯ ಮಡಿಲಿನಲ್ಲಿ ನಿತ್ಯೋತ್ಸವ....
ನಿನ್ನ ಹಣೆಯಲ್ಲಿ ರಾರಾಜಿಸುವ ಕುಂಕುಮವ ಕಂಡು ಕನ್ನಡ ಆಚರಿಸಿತು ರಾಜ್ಯೋತ್ಸವ...

ಇಂತಹ ನನ್ನ ಕರುನಾಡ ಹೆಣ್ಣು ಹೆತ್ತ ಈ ಕರುನಾಡಿಗೆ ನನ್ನ ಕೊಡುಗೆ,
ದೇಹ ಕನ್ನಡದ ಮಣ್ಣಿಗೆ,,,
ಪ್ರಾಣ ಕನ್ನಡಮ್ಮನ ಮಗಳಾದ ಈ ಹೃದಯದ ಉಸಿರಿಗೆ....



  ಹೃದಯದಿಂದ ಈ ಹೃದಯದ ಉಸಿರಿಗೆ,
            ದರ್ಶನ್...........