ಈ ಹೃದಯದ ಉಸಿರಿಗೆ........

ಪ್ರೀತಿಸುವುದು ಹೃದಯಗಳ ಪರಂಪರೆ,
ನನ್ನ ಮನಸ್ಸಿಗೆ ಆಸರೆ,
ಸುರಿವ ಮಳೆಯಲ್ಲಿಯೂ ಬೆವರಿಳಿಸುವ ನಿನ್ನ ತೋಳಸೆರೆ....
ಕಂಗಳ ಸನಿಹ ನೀ ಬಂದು ನನ್ನ ಬರಸೆಳೆದರೆ,
ಹೊರಗೆ ಬರಲಾರದು ಉಸಿರೇ.....
ಮನಸ್ಸಿನಲ್ಲಿ ಹುಟ್ಟಿದ ಭಾವನೆಗಳಿಗೆ "ಪ್ರೀತಿ" ಹೆಸರೇ?
ಬಾಳಿಗೆ ನೀ ಸುರಿಸಿದಕ್ಕೆ ಪ್ರೀತಿಯ ಅಮೃತಧಾರೆ,
ನಿನ್ನ ಹೃದಯಕ್ಕೆ ನನ್ನ ಹೃದಯವೇ ಒಲವಿನ ಉಡುಗೊರೆ.........

ಈ ಹೃದಯದ ಉಸಿರಿಗೆ....

ಮನಸ್ಸು ಯಾರ ಕ್ಯಗೂ ಸಿಗದ ಗುಪ್ತಗಾಮಿನಿ,
ಪ್ರೀತಿ ಅದರಲ್ಲಿ ಹರಿಯುವ ನಿರಂತರ ಅಮೃತವಾಹಿನಿ,
ಪ್ರೀತ್ಸೋ ಜೀವಕ್ಕೆ ಅಮೃತವರ್ಷಿಣಿ....

ಕರುನಾಡ ಹೆಣ್ಣಿಗೆ ಅಲಂಕಾರ....

ಕುಣಿಗಲ್ ಕೆರೆಯ ದಡದಲ್ಲಿ ನಾನು ಕವಿತೆ ಬರೆಯಲು ಕುಳಿತಿದ್ದೆ,
ಮೈಸೂರ ಮಲ್ಲಿಗೆಯ ಪರಿಮಳವನ್ನು ಹೃದಯಕ್ಕೆ ನೀ ಚೆಲ್ಲಿದೆ...
ಚೆಲುವಿನಲ್ಲಿ ನೀನು ಚನ್ನಪಟ್ಟಣದ ಗೊಂಬೆ...
ನಿನ್ನ ಕಂಡು ನಾಚಿತು ಮಳೆಯಲ್ಲಿ ಮೈ ನೆನೆದ ಆಗುಂಬೆ...
ನಿನ್ನ ಕೆಂಪಾದ ಕೆನ್ನೆ ಕೊಡಗಿನ ಕಿತ್ತಳೆ,
ನಿನ್ನ ಕ್ಯಗೆ ಮಲೆನಾಡ ಮಳೆಬಿಲ್ಲೇ ಕ್ಯಬಳೆ.....


ನಿನ್ನ ಕಣ್ಣು ಕಾರವಾರದ ಕಡಲ ತೀರದ ಹುಣ್ಣಿಮೆ,
ನಿನ್ನ ಕೂದಲು ರಾಮನಗರದ ರೇಶಿಮೆ....
ಮಂಡ್ಯದ ಬೆಣ್ಣೆಯಂತೆ ಬಹಳ ಮೃದು ನಿನ್ನ ಮನಸ್ಸು,
ಜೋಗದ ಜಲಪಾತದ ಭವ್ಯ ನೋಟದಂತೆ ಸೊಗಸು...

ನಿನ್ನ ಒಲವು ಕೋಲಾರದ ಚಿನ್ನದ ಗಣಿ,
ನಿನ್ನ ಕಂಡು, ಪ್ರೀತಿಯ ಕಣಿ ಹೇಳಿತು ನಾಗರಹೊಳೆಯ ಗಿಣಿ...
ನಿನ್ನ ರೂಪ ಬೇಲೂರ ಶಿಲ್ಪಕಲೆಯಂತೆ ಮೋಹಕ,
ನಿನ್ನ ಉಸಿರುಗಟ್ಟಿಸುವ ಅಪ್ಪುಗೆ, ಸಹ್ಯಾದ್ರಿಯ ತಂಗಾಳಿಯಂತೆ ರೋಚಕ.....

ನಿನ್ನ ಮನಸ್ಸು ಕರುನಾಡಿನ ಭಾವುಟ,
ನಿನಗೆ ಕೊಡುಗೆ, ನನ್ನ ಹೃದಯದ ಭೂಪಟ...
ಹೃದಯದಿಂದ,
  ದರ್ಶನ್........

ಪ್ರೀತ್ಸೋ ಹೃದಯಕ್ಕೆ ಜೋಗುಳ...

ಹುಣ್ಣಿಮೆಯ ನೆರಳೇ, ಚಂದಿರನ ಮಗಳೇ,
ಮಾಮರದ ಹಸಿರೆ, ಈ ಹೃದಯದ ಉಸಿರೇ.....
ಮಾಡದೆ ಯಾವುದೇ ಚಿಂತೆ, ಸಿಹಿಕನಸು ಕಾಣುವಂತೆ,
ಮಲಗು ಹಾಯಾಗಿ ನನ್ನ ಮಡಿಲಿನಲ್ಲಿ ಮಗುವಿನಂತೆ........
ಧೂರಿ....ಧೂರಿ.... ನನ್ನ ಜೀವ ಧೂರಿ ಧೂರಿ......
ಲಾಲಿ... ಲಾಲಿ... ನನ್ನ ಪ್ರಾಣ ಲಾಲಿ ಲಾಲಿ.........

ಮುಂಗಾರಿನ ಮಳೆಯೇ, ಸಾಗರದ ಮುತ್ತಿನ ಮಣಿಯೆ,
ಬಂಗಾರದ ಹೂವೆ, ಬೆಳದಿಂಗಳ ಚೆಲುವೆ,
ತಿಂಗಳ ತಂಪಿನಲ್ಲಿ, ತಂಗಾಳಿ ಕಂಪಿನಲ್ಲಿ....
ಮಾಡದೆ ಯಾವುದೇ ಚಿಂತೆ, ಸಿಹಿ ಕನಸು ಕಾಣುವಂತೆ,
ಮಲಗು ಹಾಯಾಗಿ ನನ್ನ ಮಡಿಲಿನಲ್ಲಿ ಮಗುವಿನಂತೆ,
ಧೂರಿ.. ಧೂರಿ.. ನನ್ನ ಜೀವ ಧೂರಿ... ಧೂರಿ........
ಲಾಲಿ.. ಲಾಲಿ.. ನನ್ನ ಪ್ರಾಣ.. ಲಾಲಿ... ಲಾಲಿ......

ಹೃದಯದ ಅಭಿಲಾಷೆ.........

ನೀನು ನನ್ನ ಹೃದಯದಲ್ಲಿ ಅರಳಿದ ಮಂದಾರ.....
ಮನದಲ್ಲಿ ಹುಟ್ಟಿದ ಅಭಿಲಾಷೆ ಹೇಳಬಯಸಿದ್ದಾನೆ ನಿನ್ನ ಹೃದಯ ಗೆದ್ದ ಚೋರ........
ನಾನೇ ಆಗಬೇಕು ನಿನ್ನ ಸೆರಗಿಗೆ ಸರದಾರ,
ನಿನ್ನ ಮುದ್ದಾದ ಕಾಲ ಬೆರಳಿಗೆ ಕಾಲುಂಗುರ,
ನಿನ್ನ ಹಣೆಗೆ ಸಿಂಧೂರ,
ನಿನ್ನ ಹೃದಯಕ್ಕೆ ನಾನೇ ವಾರಸ್ದಾರ....
ತೊಡಿಸಲು  ನಿನ್ನ ತುಟಿಗಳಿಗೆ ಮುತ್ತಿನ ಹಾರ....
ಕಾಯುತ್ತಿರುವನು ನಿನ್ನನ್ನೇ ಕಂಗಳಲ್ಲಿ ತುಂಬಿಕೊಂಡು ಕನಸು ಕಾಣುತ್ತಿರುವ ಕನಸುಗಾರ.....

   

ಪಿಸುಮಾತು ಆಯಿತು ಕವನ

ನೀನು ಎದೆಯ ಬಾಗಿಲಿಗೆ ತೋರಣ,ಹೃದಯದ ಹೋಳಿಗೆಗೆ ಹೂರಣ....

ನಿನ್ನಿಂದಲೇ ಮನಸ್ಸಿನಲ್ಲಿ ಆಗಿದ್ದು 

ಪ್ರೀತಿಯ ಜನನಹಾಳಾದ ಕೊಂಪೆ ಆಗಿತ್ತು ಮನಸ್ಸಿನ ಆವರಣ

ನಿನ್ನ ಪ್ರೀತಿ ಅಳಿಸಿ ಹಾಕಿ ಮನಸ್ಸಿನ ಕಲ್ಮಶವನ್ನ

ಆಯಿತು ಪ್ರೀತಿ ತುಂಬಿದ ಮನಸ್ಸಿನ ಅನಾವರಣ

ನಿನ್ನ ನಗು ಪ್ರಕೃತಿಗೆ ಆಭರಣನಿನ್ನ ನೋಟ ಬೆಳದಿಂಗಳ ಶಶಿಕಿರಣ

ನಿನ್ನ ಪ್ರೀತಿಸಲು ನನಗೆ ಬೇಕಿಲ್ಲ ಕಾರಣ

ನಿನ್ನೊಂದಿಗೆ ಸವೆಸಲು ಆಸೆ ಈ ಬಾಳ ಪಯಣ...

ನಿನ್ನ ಪ್ರೀತಿಸುತ್ತಲೇ ಈ ಹೃದಯದ ಪಿಸುಮಾತು ಆಯಿತು ಕವನ.....

ಹಾಗೆ ಸುಮ್ಮನೆ

ಪ್ರೀತಿ ಪ್ರಕೃತಿಯ ಸುಂದರ ಕಲ್ಪನೆ,,,

ಪ್ರೀತಿ ಮನಸ್ಸಿನ ಅತ್ಯಂತ ಮಧುರವಾದ ಭಾವನೆ...

ಪ್ರೀತಿ ಮನಸ್ಸಿಗೆ ಸಿಹಿಯಾದ ಯಾತನೆ....

 ಪ್ರೀತಿಸಿದ ಮೇಲೆ ಮಾಡಬಾರದು ಯೋಚನೆ,,,,

ಯಾಕೆ ಅಂದ್ರೆ ಪ್ರೀತಿ ಹುಟ್ಟುವುದು ನೀಡದೆ ಸೂಚನೆ....

ಅವಳ ನೆನಪು ಬರುತ್ತಿದೆ ಹೃದಯದಲ್ಲಿ ಮೆಲ್ಲನೆ,,,,

ಅವಳು ಕೊಟ್ಟ ಸಿಹಿಮುತ್ತನ್ನು ನೆನೆದು ಕೆಂಪಾಗುತ್ತಿದೆ ಕೆನ್ನೆ....

ಬರೆಯುತಾ ಪ್ರೀತಿಯ ಬಗ್ಗೆ, ಹೃದಯದ ಪಿಸುಮಾತು ಹಾಡಾಯಿತು ಹಾಗೆ ಸುಮ್ಮನೆ...

ನವಿಲುಗರಿಯಷ್ಟೇ ಸುಂದರ

ಮರಳ ಮೇಲೆ ನಿನ್ನ ಬೆರಳು ಹಿಡಿದು ಬರೆಯುವೆ ಒಲವಿನ ಅಕ್ಷರ

ಪ್ರೀತಿಸಲು ಶುರು ಮಾಡಿದಾಗ ನಾವು ಪರಸ್ಪರ

ನಾಚಿಕೆಯಿಂದ ಹಸಿರಾಯಿತು ಪ್ರಕೃತಿಯ ಪರಿಸರ ...

ಇರಬಹುದು ನನ್ನ ಹೃದಯ ಪ್ರೀತಿಯ ಸರೋವರ ಆದರೆ ನೀನು

ಪ್ರೀತಿಯಲ್ಲಿ ನನ್ನನ್ನು ಮೀರಿದ ಸಾಗರ  ನಿನ್ನಿಂದಲೇ ಈ ಜೀವನದ ಸಾಕ್ಷಾತ್ಕಾರ  

ನೀನಿಲ್ಲದ ಜೀವನದಲ್ಲಿ ಇಲ್ಲ ಸಡಗರ ನೀನು ಮನಸ್ಸಿನ ಪುಟಗಳಲ್ಲಿ ನಡುವೆ ಇಟ್ಟ ನವಿಲುಗರಿಯಷ್ಟೇ ಸುಂದರ....

ಮನಸ್ಸಿನ ತುಂಬಾ ಹಬ್ಬದ ಸಂಭ್ರಮ


ಉಸಿರಿನ ವೀಣೆಯು ನುಡಿಸುತಿದೆ ರೋಮಾಂಚನದ ಸರಿಗಮ....


ಕಾರಣ, ನನ್ನನಿನ್ನ ಹೃದಯಗಳ ಸಂಗಮ...

ಪ್ರೀತಿ ಹೃದಯದಲ್ಲಿ ಅರಳುವ ಸುಮ....

ಪ್ರೀತಿಯಿಂದಲೇ ಆಗುವುದು ದುಂಬಿ-ಸುಮಗಳ ಸಮಾಗಮ....

ಪ್ರೀತಿ ತುಂಬಿದ ಕಣ್ಣಿನ ನೋಟ ಹೃದಯಂಗಮ

ನೀನಿರಲು ನನ್ನ ಬಾಹುಗಳಲ್ಲಿ, ಮನಸ್ಸಿನ ತುಂಬಾ ಹಬ್ಬದ ಸಂಭ್ರಮ.....

ಈ ಕವಿತೆಗೆ ನೀನೇ ಸ್ಪೂರ್ತಿ

ಈ ಕವಿತೆಗೆ ನೀನೇ ಸ್ಪೂರ್ತಿ....

ಹೃದಯದ ಕಲ್ಲನ್ನು ಕೆತ್ತಿ,ನೀ ಮಾಡಿದೆ ನನ್ನನ್ನು ಮೂರ್ತಿ...

ಬೆಳಗಲಿ ಭೂಮಿ ಇರುವವರೆಗೂ ನಿನ್ನ ಕೀರ್ತಿ.....

ಈ ಹೃದಯ ಹೂವಾಗಲು ಕಾರಣ ನಿನ್ನ ಪ್ರೀತಿ.....

ನೀನು ಇರುವುದಾದರೆ ನನ್ನೊಂದಿಗೆ ಇದೆ ರೀತಿ

ಜೊತೆಜೊತೆಯಲಿ ಹೆಜ್ಜೆ ಹಾಕುವೆ ನಿನ್ನ ಜೊತೆ ಜೀವನ ಪೂರ್ತಿ........

ಅವಳ ಪ್ರೀತಿಯೊಂದೆ ಕಾರಣ

ಚೆಂದವಾಗಿರಲು ನನ್ನ ಕವನ,

ಅವಳ ಪ್ರೀತಿಯೊಂದೆ ಕಾರಣ....

ಅವಳ ನಗು ಕಂಪನ್ನು ಬೀರುವ ಚಂದನ

ಅವಳ ಉಸಿರುಏ ಜೀವಕ್ಕೆ ಅಮೃತ ಸಿಂಚನ.....

ಅವಳ ಪ್ರೀತಿ ಪಡೆದ ನನ್ನ ಮನಸ್ಸಾಯಿತು ಪಾವನ

ಬಿಡೋದಕ್ಕೆ ಸಿದ್ಧ ಅಂತಾರೆ ಪ್ರಾಣ, ಪ್ರೀತಿಯಲ್ಲೇ ಪ್ರಾಣಇರೋದು ಅಂತ ತಿಳಿಯದೆ ಇರೋ ಜನ......

ತೀರಿಸಲಾಗದು ಪ್ರೀತಿ ಕೊಟ್ಟ ಹೃದಯದ, ಹೆತ್ತವರ ಋಣ.....

ಪ್ರೀತಿ ಬಾಳ ದಾರಿಯಲಿ

ಪ್ರೀತಿ ಬಾಳ ದಾರಿಯಲಿ ನಿರಂತರ ಪಯಣ...

ಎರಡು ಹೃದಯಗಳ ಅಯನ......

ಮನಸ್ಸಿಗೆ ಅಮೃತದ ಸಿಂಚನ.....

ಬೆಚ್ಚನೆಯ ಬಾಹುಗಳ ಸಿಹಿಯಾದ ಕಂಪನ....

ಪ್ರೀತಿಸುವಾಗ ಎರಡು ತುಟಿಗಳು ಯಾವಾಗಲೂ ಮೌನ...

ಬರೆಯುತಾ ಬರೆಯುತಾ ಹೃದಯದ ಪಿಸುಮಾತು ಆಯಿತು ಕವನ......

ನೋಡಿ ಆ ನಿನ್ನ ಕಂಗಳು

ನೋಡಿ ನಿನ್ನ ಕಂಗಳು,
ತಂಪಾಯಿತು ಬಿಸಿಲು.....
ನಲಿದದುತ್ತಿರಲು ನಿನ್ನ ಮುಂಗುರುಳು,
ನಾಚಿ ಕರಗಿತು ಬೆಳದಿಂಗಳು....
ನಿನ್ನ ಮನಸ್ಸು ಪ್ರೀತಿಯ ಕಡಲು..
ಪ್ರೀತಿಯ ಮಳೆಯಾಗಿ ನೀನು ಬರಲು,
ಸ್ವಾಗತಿಸುವೆ ನಿನ್ನನ್ನು ತೆರೆದು ಹೃದಯದ ಬಾಗಿಲು........

ಏನೆಂದು ಬರೆಯಲಿ ನಿನ್ನ ಬಗ್ಗೆ

ಏನೆಂದು ಬರೆಯಲಿ ನಿನ್ನ ಬಗ್ಗೆ?????
ನೀನು ನನ್ನಲ್ಲಿ ಸ್ಫೂರ್ತಿ ಉಕ್ಕಿಸುವ ಬುಗ್ಗೆ,
ನೀನಿಲ್ಲದೆ ಇರದು ಈ ಜೀವ ನನ್ನ ದೇಹದಲ್ಲಿ ಒಂದೂ ಘಳಿಗೆ....
ನೀನು ಪ್ರೀತಿಯ ಪರಿಮಳ ಸೂಸುವ ಮಲ್ಲಿಗೆ
ಕಂಡರೆ ನಿನ್ನ ಸಿಹಿಯಾದ ಮುಗುಳ್ನಗೆ
ಕಲ್ಲು ಕೂಡ ಅರಳಿ ಹೂವಾಗುವುದು ಮೆಲ್ಲಗೆ
ಹಚ್ಚಿ ಹೃದಯದಲ್ಲಿ ಪ್ರೇಮದ ದೀವಿಗೆ
ಬೆಳಕು ತಂದೆ ಕತ್ತಲಾಗಿದ್ದ ಬಾಳಿಗೆ
ನಮ್ಮ ಜೀವನ ಪ್ರೀತಿಯ ತೇರಿನ ಮೆರವಣಿಗೆ
ನಿನ್ನಿಂದಲೇ ನಿನಗಾಗಿ ನಿನಗೊಸ್ಕರವೇ ಈ ಬರವಣಿಗೆ

ಅವಳು ಮಾಡಿದ ಮೋಸ

ನಾನು ಸಾಕಿದ ಗಿಣಿ ಗಿಡುಗವಾಯಿತು....
ಅವಳು ಮಾಡಿದ ಮೋಸ ನನ್ನ ಹೃದಯವನ್ನು ಕಿತ್ತು ತಿಂದಿತ್ತು...
ನನ್ನ ಹೃದಯದಲ್ಲಿ ಬೆಳೆಸಿದ್ದ ಹೂವು ಹಾವಾಯಿತು....
ಆಗದಿದ್ದರೂ ನನ್ನಿಂದ ಅವಳಿಗೆ ಯಾವುದೇ ಆಪತ್ತು,
ಬಿಟ್ಟು ಹೋಗಬೇಡ ಎಂದು ಕೂಗಿ ಕರೆದರೂ ಕೇಳಿಸದ ಹಾಗೆ ಹೋದಳು ಹೊರಟು...
ಮಾಡಿ ಹೃದಯದಲ್ಲಿ ಅಳಿಸಲಾಗದ ಗಾಯದ ಗುರುತು,
ಹೊರಟೆ ಹೋದಳು ನಾನು ಅವಳ ಮೇಲೆ ಸುರಿಸಿದ ಪ್ರೀತಿಯ ಮಳೆಯ ಮರೆತು....
ನನ್ನ ಮನಸ್ಸಿನಲ್ಲಿದ್ದ ಕನಸುಗಳೆಲ್ಲ ಸ್ಮಶಾನ ಸೇರಿವೆ ಸತ್ತು,
ಕಾರಣ ಅವಳು ಕೊಟ್ಟ ಜೀವ ಕಳೆವ ಅಮೃತದ ತುತ್ತು...
ಹೀಗೆ ಹುಟ್ಟಿದ್ದು ಈ ಹೃದಯದ ಪಿಸುಮಾತು.......

ಪ್ರೀತ್ಸೋಕೆ ಮುಂಚೆ ಒಂದು ಕ್ಷಣ ಯೋಚಿಸಿ ಹೃದಯಗಳೇ....
Bcoz....ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು...ಹೃದಯ ಒಡೆದರೆ ಸೇರಿಸಲಾಗದು ಯಾವತ್ತೂ.............

ಪ್ರೀತಿಯ ಮುಂಗಾರು

ಅವಳು ಜೊತೆಯಲ್ಲಿದ್ದಾಗ ಮನಸ್ಸಿನಲ್ಲಿ ಸುರಿಯುತಿತ್ತು ಪ್ರೀತಿಯ ಮುಂಗಾರು....
ಅವಳಿಲ್ಲದೆ ಈಗ,ಹೃದಯ ಪಾಳು ಬಿದ್ದ ಸೂರು...
ಅವಳ ಪ್ರೀತಿಯಿಲ್ಲದೆ ಬರಿದಾಗಿದೆ ಮನಸ್ಸಿನ ಬಸಿರು...
ಅವಳು ಬಿಟ್ಟುಹೋದದ್ದು ಒಡೆದ ಮನಸ್ಸಿನ ಸಾವಿರ ಚೂರು,
ಹೃದಯದಲ್ಲಿ ನೋವಿನ ನಿಟ್ಟುಸಿರು,
ಕಂಗಳಲ್ಲಿ ವೇದನೆಯ ಕಣ್ಣೀರು..........