ಅರಳು ಮಲ್ಲಿಗೆ ಅರಳು ಮಲ್ಲಿಗೆ... ನೀ ಅರಳಿಸೊಮ್ಮೆ ಒಂದು ಹೂ ನಗೆ...
ಬರಲಿ ಹುಣ್ಣಿಮೆ... ಬರಲಿ ಹುಣ್ಣಿಮೆ... ನೀ ಬರುವ ದಾರಿಯಲ್ಲಿ ಹುಣ್ಣಿಮೆ.....
ಭಾವನೆ,,, ನಿನ್ನ ಕಂಗಳಲ್ಲಿದೆ... ಆಕರ್ಷಣೆ,,,, ಕಣ್ ರೆಪ್ಪೆಯಲ್ಲಿದೆ...
ನಿನ್ನಿಂದಲೇ ಜಗಕೆ ಪೌರ್ಣಿಮೆ....

ಈ ಜನ್ಮವು ಮರುಜನ್ಮವು ನಿನ್ನೊಂದಿಗಿರಲಿ...
ಈ ಜೀವಕೆ ಒಲುಮೆಯು ನಿನಗಾಗಿರಲಿ...
ಈ ಹೃದಯದಕೆ ಉಸಿರು ಎಂದೂ ನೀನೆ ಕಣೆ....

ನಿನ್ ಹೆಸರಿಗೆ ನನ್ ಹೆಸರು ಸೇರಿದ ಘಳಿಗೆ....
ನಮ್ಮ ಪ್ರೀತಿಯ ಪ್ರತಿರೂಪ ನಿನ್ ಒಡಲೊಳಗೆ ...
ನಮ್ಮ ಪ್ರೀತಿಲಿ ಅದಕ್ಕೂ ಒಂದು ಪಾಲು ಕಣೆ...

ಕಣ್ಣ ಬೆಳಕಲ್ಲಿ.. ಲಜ್ಜೆ ಥುಳುಕಿದೆ....
ರಂಗಿನ ಹೋಳಿ.. ನಮ್ಮ ಬಾಳಲಿ
ಹಾಕುವೆ ಹೆಜ್ಜೆ... ನಿನ್ನ ಜೊತೆಯಲಿ.....

1 Response to " "

  1. G R V says:
    January 27, 2012 at 6:57 PM

    Heyy anna ಹಾಡು ತು0ಬ ಚನ್ನಾಗಿದೆ.... Jus loved the lines penned from yo heart...

Post a Comment