(ಈ ಹೃದಯದ ಉಸಿರಿಗೆ) ಕರುನಾಡ ಹೆಣ್ಣಿಗೆ ಅಲಂಕಾರ....

ನಿನ್ನ ಕಣ್ಣಿಗೆ ಕಾಡಿಗೆ ಆಯಿತು ಕರಾವಳಿ...
ನಿನ್ನ ಕಂಗಳ ಬೆಳಕಿನಿಂದಲೇ ಕರುನಾಡಿಗೆ ದೀಪಾವಳಿ...
ನಿನ್ನ ಉಸಿರಿನ ಪರಿಮಳಕ್ಕೆ ಸಾಟಿ ಇಲ್ಲ ಗಂಧದಗುಡಿಯ ಗಂಧಸಿರಿ..
ನಿನ್ನ ಚೆಲುವಿನಿಂದಲೇ ಇತಿಹಾಸ ಸೇರಿದ್ದು ಐಹೊಳೆಯ ಐಸಿರಿ...

ನಿನ್ನ ನಗು ನಗುವಿನಹಳ್ಳಿಯೇ ನಾಚುವಷ್ಟು ಸುಂದರ...
ನಿನ್ನ ಕ್ಯಗಳಿಗೆ ಬಳೆ ತೊಡಿಸಬೇಕಂತೆ ಬನವಾಸಿಯ ಬಳೆಗಾರ...
ನಿನ್ನ ಸೆಳೆಯಲೆಂದೇ ಕಿಂದರಿ ಜೋಗಿ ಊದಲು ಕಲಿತಿದ್ದು ತುತ್ತೂರಿ...
ನಿನ್ನ ಸೋಕಿ ಪುನೀತಳಾದಳು ಕೊಡಗಿನ ಕಾವೇರಿ...

ನಿನ್ನ ಕೇಶರಾಶಿಯ ಕಂಡು ಭೋರ್ಗರೆಯಿತು ಭರಚುಕ್ಕಿಯ ಜಲಪಾತ...
ನಿನ್ನ ಬಾಹುಗಳ ಬೆಚ್ಚನೆಯ ಅಪ್ಪುಗೆಯಿಂದ ಬಯಲುಸೀಮೆಯ ಬೆಟ್ಟಗಳಲ್ಲೂ ಹಿಮಪಾತ...
ನಮ್ಮ ಮದುವೆಗೆ ಮಲೆನಾಡು ಆಯಿತು ದಿಬ್ಬಣ...
ನಮ್ಮ ಹೃದಯಗಳ ಮಿಲನಕ್ಕೆ ಸಾಕ್ಷಿ ಮುರ್ಡೆಶ್ವರದ ಮೂಡಣ..

ನಿನ್ನ ನಾಡಿ ಮಿಡಿತದ ನಾದಕ್ಕೆ ಶ್ರುತಿ ಸೇರಿಸಿತು ರಂಗನತಿಟ್ಟಿನ ಕೋಗಿಲೆಯ ಕಲರವ,,
ಹೃದಯಂಗಮವಾದ ನಿನ್ನ ಪ್ರೀತಿಯಿಂದಲೇ ತುಂಗಭದ್ರೆಯ ಮಡಿಲಿನಲ್ಲಿ ನಿತ್ಯೋತ್ಸವ....
ನಿನ್ನ ಹಣೆಯಲ್ಲಿ ರಾರಾಜಿಸುವ ಕುಂಕುಮವ ಕಂಡು ಕನ್ನಡ ಆಚರಿಸಿತು ರಾಜ್ಯೋತ್ಸವ...

ಇಂತಹ ನನ್ನ ಕರುನಾಡ ಹೆಣ್ಣು ಹೆತ್ತ ಈ ಕರುನಾಡಿಗೆ ನನ್ನ ಕೊಡುಗೆ,
ದೇಹ ಕನ್ನಡದ ಮಣ್ಣಿಗೆ,,,
ಪ್ರಾಣ ಕನ್ನಡಮ್ಮನ ಮಗಳಾದ ಈ ಹೃದಯದ ಉಸಿರಿಗೆ....



  ಹೃದಯದಿಂದ ಈ ಹೃದಯದ ಉಸಿರಿಗೆ,
            ದರ್ಶನ್...........  

4 Response to "(ಈ ಹೃದಯದ ಉಸಿರಿಗೆ) ಕರುನಾಡ ಹೆಣ್ಣಿಗೆ ಅಲಂಕಾರ...."

  1. ajay says:
    November 11, 2010 at 8:47 AM

    maga super kano :D

  2. ಪ್ರವೀಣ್ ಭಟ್ says:
    November 16, 2010 at 3:36 AM

    Mast ide Darshan.. swalpa kavanada tara allign madidre innu chennagirutte

  3. Unknown says:
    November 16, 2010 at 7:55 AM

    Dhanyavaadagalu praveen & Ajay....

  4. Nisha says:
    November 18, 2010 at 8:09 PM

    Chennagide

Post a Comment